Source: 
Kannada.oneindia
Author: 
Date: 
16.02.2022
City: 
Lucknow

ಉತ್ತರಪ್ರದೇಶದಲ್ಲಿ ಮೂರನೇ ಹಂತದ ಚುನಾವಣೆ ಭಾನುವಾರ (ಫೆ.20) ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದಲ್ಲಿ 623 ಅಭ್ಯರ್ಥಿಗಳ ಪೈಕಿ 135 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯ ಪ್ರಕಾರ 103 (17%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಎಸ್‌ಪಿಯ 58 ಅಭ್ಯರ್ಥಿಗಳಲ್ಲಿ 30 (52%) ಅಭ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಬಿಜೆಪಿಯ 55 ಅಭ್ಯರ್ಥಿಗಳಲ್ಲಿ 25 (46%) ಅಭ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. BSP ಯ 59 ಅಭ್ಯರ್ಥಿಗಳಲ್ಲಿ 23 (39%), INCಯ 56 ಅಭ್ಯರ್ಥಿಗಳಲ್ಲಿ 20 (36%) ಮತ್ತು AAPಯ 49 ಅಭ್ಯರ್ಥಿಗಳಲ್ಲಿ 11 (22%) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧ

ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳೆಂದರೆ: SPಯ 58 ಅಭ್ಯರ್ಥಿಗಳಲ್ಲಿ 21 (36%)ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಬಿಜೆಪಿ 55 ಅಭ್ಯರ್ಥಿಗಳಲ್ಲಿ 20 (36%), BSPಯ 59 ಅಭ್ಯರ್ಥಿಗಳಲ್ಲಿ 18 (31%)ಅಭ್ಯರ್ಥಿಗಳು, ಇನ್ನೂ INC ಯಿಂದ 56 ಅಭ್ಯರ್ಥಿಗಳಲ್ಲಿ 10 (18%)ಅಭ್ಯರ್ಥಿಗಳು ಮತ್ತು AAPಯ 49 ಅಭ್ಯರ್ಥಿಗಳಲ್ಲಿ 11 (22%)ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

ಇದರಲ್ಲಿ 11 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 11 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಇನ್ನೂ ಇಬ್ಬರು ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿ ಸೆಕ್ಷನ್-302) ಘೋಷಿಸಿಕೊಂಡಿದ್ದಾರೆ. ಜೊತೆಗೆ ಇವರಲ್ಲಿ 18 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನಕ್ಕೆ (IPC ಸೆಕ್ಷನ್-307) ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ.

ಕ್ರಿಮಿನಲ್ ಮೊಕದ್ದಮೆ

ಮೂರನೇ ಹಂತದ ಚುನಾವಣೆಯಲ್ಲಿ 59 ಕ್ಷೇತ್ರಗಳಲ್ಲಿ 26(44%) ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ರೆಡ್ ಅಲರ್ಟ್ ಕ್ಷೇತ್ರಗಳೆಂದರೆ 3 ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಕೋಟ್ಯಾಧಿಪತಿ ಅಭ್ಯರ್ಥಿಗಳು

ಮೂರನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ 623 ಅಭ್ಯರ್ಥಿಗಳಲ್ಲಿ 245 (39%) ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

ಪಕ್ಷವಾರು ಕೋಟ್ಯಾಧಿಪತಿ ಅಭ್ಯರ್ಥಿಗಳು: ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದನ್ನು ಗಮನಿಸಿದರೆ ನಮ್ಮ ಚುನಾವಣೆಯಲ್ಲಿ ಹಣಬಲದ ಪಾತ್ರ ಸ್ಪಷ್ಟವಾಗಿದೆ. ಪ್ರಮುಖ ಪಕ್ಷಗಳ ಪೈಕಿ ಎಸ್‌ಪಿಯ 58 ಅಭ್ಯರ್ಥಿಗಳಲ್ಲಿ 52 (90%) ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಬಿಜೆಪಿಯಿಂದ 55 ಅಭ್ಯರ್ಥಿಗಳಲ್ಲಿ 48 (87%), BSPಯ 59 ಅಭ್ಯರ್ಥಿಗಳಲ್ಲಿ 46 (78%), INCಯ 56 ಅಭ್ಯರ್ಥಿಗಳಲ್ಲಿ 29 (52%) ಮತ್ತು AAP ನ 49 ಅಭ್ಯರ್ಥಿಗಳಲ್ಲಿ 18 (37%) ಅಭ್ಯರ್ಥಿಗಳು 1 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಸರಾಸರಿ ಆಸ್ತಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ 2022 ಹಂತ III ರಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ 2.82 ಕೋಟಿ ರೂ. ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ.

ಪಕ್ಷವಾರು ಸರಾಸರಿ ಆಸ್ತಿ: ಪ್ರಮುಖ ಪಕ್ಷಗಳಲ್ಲಿ, 58 ಎಸ್‌ಪಿ ಅಭ್ಯರ್ಥಿಗಳುರೂ. 9.19 ಕೋಟಿ ರೂ ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ. ಬಿಜೆಪಿಯ 55 ಅಭ್ಯರ್ಥಿಗಳು 6.74 ಕೋಟಿ ರೂ., 56 INC ಅಭ್ಯರ್ಥಿಗಳ 4.60 ಕೋಟಿ ರೂ., 59 BSP ಅಭ್ಯರ್ಥಿಗಳ 4.28 ಕೋಟಿ ಮತ್ತು 49 AAP ಅಭ್ಯರ್ಥಿಗಳ 1.31 ಕೋಟಿ ರೂ. ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ.

ಇತರ ವಿವರಗಳು

ಅಭ್ಯರ್ಥಿಗಳ ವಯಸ್ಸಿನ ವಿವರಗಳು: ಮೂರನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ 241 (39%) ಅಭ್ಯರ್ಥಿಗಳು ತಮ್ಮ ವಯಸ್ಸು 25 ರಿಂದ 40 ವರ್ಷಗಳು ಎಂದು ಘೋಷಿಸಿದ್ದಾರೆ. 300 (48%) ಅಭ್ಯರ್ಥಿಗಳು ತಮ್ಮ ವಯಸ್ಸು 41 ರಿಂದ 60 ವರ್ಷಗಳು ಎಂದು ಘೋಷಿಸಿದರೆ 81 (13%) ಅಭ್ಯರ್ಥಿಗಳು ತಮ್ಮ ವಯಸ್ಸು 61 ರಿಂದ 80 ವರ್ಷ ಎಂದು ಘೋಷಿಸಿದ್ದಾರೆ ಮತ್ತು 1 ಅಭ್ಯರ್ಥಿಯು ತನ್ನ ವಯಸ್ಸನ್ನು 83 ವರ್ಷ ಎಂದು ಘೋಷಿಸಿದ್ದಾರೆ.

ಅಭ್ಯರ್ಥಿಗಳ ಲಿಂಗ ವಿವರಗಳು: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಹಂತ III ರಲ್ಲಿ 96(15%) ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

© Association for Democratic Reforms
Privacy And Terms Of Use
Donation Payment Method