2020-21 ಮತ್ತು 2021-22 ರ ಆರ್ಥಿಕ ವರ್ಷಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ನಂತರ ಉದ್ಯೋಗ ಕಡಿತ ಅಥವಾ ಸಂಬಳದಲ್ಲಿ ಕಡಿತದಿಂದಾಗಿ ಜನರ ಆದಾಯವು ಕಡಿಮೆಯಾಗಿದೆ. ಆದರೆ ಇದೇ ಅವಧಿಯಲ್ಲಿ ದೇಶದ 8 ಪ್ರಮುಖ ರಾಷ್ಟ್ರೀಯ ಪಕ್ಷಗಳ ಸಂಪತ್ತಿನಲ್ಲಿ ಪ್ರಬಲ ಜಿಗಿತ ಕಂಡುಬಂದಿದೆ
2020-21 ಮತ್ತು 2021-22 ರ ಆರ್ಥಿಕ ವರ್ಷಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ನಂತರ ಉದ್ಯೋಗ ಕಡಿತ ಅಥವಾ ಸಂಬಳದಲ್ಲಿ ಕಡಿತದಿಂದಾಗಿ ಜನರ ಆದಾಯವು ಕಡಿಮೆಯಾಗಿದೆ. ಆದರೆ ಇದೇ ಅವಧಿಯಲ್ಲಿ ದೇಶದ 8 ಪ್ರಮುಖ ರಾಷ್ಟ್ರೀಯ ಪಕ್ಷಗಳ ಸಂಪತ್ತಿನಲ್ಲಿ ಪ್ರಬಲ ಜಿಗಿತ ಕಂಡುಬಂದಿದೆ.
2020-21ರಲ್ಲಿ ಈ 8 ರಾಜಕೀಯ ಪಕ್ಷಗಳ ಆಸ್ತಿ 7297.618 ಕೋಟಿಗಳಿಂದ 2021-22ರಲ್ಲಿ 8829.158 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಕೇವಲ ಒಂದೇ ವರ್ಷದಲ್ಲಿ ಈ ಪಕ್ಷಗಳ ಸಂಪತ್ತು ಶೇ.21ರಷ್ಟು ಹೆಚ್ಚಾಗಿದೆ
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR)ವರದಿಯಂತೆ 2020-21 ಮತ್ತು 2021-22ರ ಅವಧಿಯಲ್ಲಿ 8 ರಾಷ್ಟ್ರೀಯ ರಾಜಕೀಯ ಪಕ್ಷಗಳ ಆಸ್ತಿ ಪರಿಶೀಲಿಸಿದ ಎಡಿಆರ್ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಈ 8 ರಾಜಕೀಯ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎನ್ಸಿಪಿ, ಬಿಎಸ್ಪಿ, ಸಿಪಿಐ, ಸಿಪಿಐಎಂ, ಟಿಎಂಸಿ ಮತ್ತು ಎನ್ಪಿಇಪಿ ಸೇರಿವೆ.
ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷ : ಎಡಿಆರ್ ತನ್ನ ವರದಿಯಂತೆ 2020-21ರಲ್ಲಿ ಬಿಜೆಪಿ ಒಟ್ಟು ಆಸ್ತಿಯನ್ನು 4990.195 ಕೋಟಿ ರೂಪಾಯಿ ಎಂದು ಘೋಷಿಸಿದೆ. ಇದು 2021-22 ರಲ್ಲಿ ಒಂದು ವರ್ಷದ ನಂತರ 21.7 % ಏರಿಕೆಯಿಂದ 6046.81 ಕೋಟಿಗೆ ಏರಿದೆ.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ 2020-21ರಲ್ಲಿ 691.11 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿತ್ತು, ಇದು 2021-22ರಲ್ಲಿ 805.68 ಕೋಟಿಗೆ, ಅಂದರೆ 16.58 ಪ್ರತಿಶತದಷ್ಟು ಹೆಚ್ಚಾಗಿದೆ.
ಎಡಿಆರ್ ವರದಿಯ ಪ್ರಕಾರ, ಈ ಅವಧಿಯಲ್ಲಿ ಆಸ್ತಿ ಕುಸಿತ ಕಂಡ ಏಕೈಕ ರಾಷ್ಟ್ರೀಯ ಪಕ್ಷ ಬಹುಜನ ಸಮಾಜ ಪಕ್ಷ. 2020-21ರಲ್ಲಿ ಬಿಎಸ್ಪಿಯ ಒಟ್ಟು ಆಸ್ತಿ 732.79 ಕೋಟಿ ರೂ.ಗಳಾಗಿದ್ದು, 2021-22ರಲ್ಲಿ 690.71 ಕೋಟಿ ರೂ.ಗೆ ಇಳಿಕೆಯಾಗಿದೆ. ಪಶ್ಚಿಮ ಬಂಗಾಳದ ಟಿಎಂಸಿಯ ಆಸ್ತಿ 2020-21ರಲ್ಲಿ 182.001 ಕೋಟಿ ರೂ.ಗಳಾಗಿದ್ದು, 2021-22ರಲ್ಲಿ ಶೇ.151.70ರಷ್ಟು ಏರಿಕೆಯಾಗಿ 458.10 ಕೋಟಿ ತಲುಪಿದೆ. ಟಿಎಂಸಿಯ ಆಸ್ತಿಯಲ್ಲಿ ಮಾತ್ರ ಅತಿ ವೇಗದ ಏರಿಕೆ ಕಂಡುಬಂದಿದೆ.
ಸಿಪಿಐ(ಎಂ) ಆಸ್ತಿ 654.79 ಕೋಟಿಯಿಂದ .735.77 ಕೋಟಿಗೆ ಬೆಳೆದರೆ, ಸಿಪಿಐ 14.05 ಕೋಟಿಯಿಂದ 15.72 ಕೋಟಿಗೆ ಏರಿದೆ. ಎನ್ಸಿಪಿ ಆಸ್ತಿಯಲ್ಲಿ 30.93 ಕೋಟಿ ರೂಗಳಿಂದ 74.53 ಕೋಟಿ ರೂಗೆ ಏರಿಕೆ ಕಂಡಿದೆ. ಇನ್ನು ಎನ್ಪಿಇಪಿಗೆ 1.72 ಕೋಟಿಯಿಂದ 1.82 ಕೋಟಿಗೆ ಏರಿಕೆಯಾಗಿದೆ.