ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳಾಗಿದ್ದು ಅವರ ಪೈಕಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅತ್ಯಂತ ಹೆಚ್ಚು ಅಂದರೆ ರೂ. 510 ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ ಎಂದು ಚುನಾವಣಾ ಅಫಿಡವಿಟ್‌ಗಳನ್ನು ಅವಲೋಕಿಸಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯೊಂದು ಹೇಳಿದೆ. ಕನಿಷ್ಠ ಸಂಪತ್ತನ್ನು ಹೊಂದಿರುವ ಮುಖ್ಯಮಂತ್ರಿಯಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಪಟ್ಟಿಯಲ್ಲಿದ್ದಾರೆ ಹಾಗೂ ಅವರ ಒಟ್ಟು ಸಂಪತ್ತಿನ ಮೌಲ್ಯ ರೂ. 15 ಲಕ್ಷ ಆಗಿರುವುದು ವರದಿಯಲ್ಲಿ ತಿಳಿಸಲಾಗಿದೆ.
ಎಲ್ಲಾ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಸ್ವಘೋಷಿತ ಅಫಿಡವಿಟ್‌ಗಳನ್ನು ಅವಲೋಕಿಸಿ ವರದಿ ಹೊರತರಲಾಗಿದೆ ಎಂದು ಎಡಿಆರ್ ಮತ್ತು ಇಲೆಕ್ಷನ್ ವಾಚ್ ಹೇಳಿವೆ. 30 ಸಿಎಂಗಳ ಪೈಕಿ 29 (ಶೇ. 97) ಕೋಟ್ಯಾಧಿಪತಿಗಳಾಗಿದ್ದಾರೆ ಹಾಗೂ ಸರಾಸರಿ ರೂ. 33.96 ಕೋಟಿ ಸಂಪತ್ತು ಹೊಂದಿದ್ದಾರೆ. ಈ 30 ಮಂದಿಯ ಪೈಕಿ 13 ಮಂದಿ (ಶೇ. 43) ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಕೊಲೆ, ಕೊಲೆಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳಿವೆ.
ಗರಿಷ್ಠ ಆಸ್ತಿಯ ಒಡೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ (ರೂ. 510 ಕೋಟಿಗೂ ಹೆಚ್ಚು) ಆಗಿದ್ದರೆ, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು (ರೂ. 163 ಕೋಟಿಗೂ ಹೆಚ್ಚು) ಹಾಗೂ ಒಡಿಶಾದ ನವೀನ್ ಪಟ್ನಾಯಕ್ (ರೂ. 63 ಕೋಟಿಗೂ ಹೆಚ್ಚು) ಇದ್ದಾರೆ.
ಕನಿಷ್ಠ ಘೋಷಿತ ಸಂಪತ್ತು ಹೊಂದಿರುವವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ (ರೂ. 15 ಲಕ್ಷಕ್ಕೂ ಹೆಚ್ಚು) ಕೇರಳದ ಪಿಣರಾಯಿ ವಿಜಯನ್ ಹಾಗೂ ಹರ್ಯಾಣ ಸೀಎಂ ಮನೋಹರ್ ಲಾಲ್ ಖಟ್ಟರ್ (ರೂ. 1 ಕೋಟಿಗೂ ಹೆಚ್ಚು)
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್