Source: 
Kannada.asianetnews
https://kannada.asianetnews.com/politics/national-parties-collects-rs-15077-crore-from-unknown-sources-says-adr-analysis-ckm-rh87g1
Author: 
Suvarna News
Date: 
26.08.2022
City: 
New Delhi

ರಾಜಕೀಯ ಪಕ್ಷಗಳು ನಿಧಿ ಸಂಗ್ರಹ ಮಾಡುವುದು ಹೊಸದೇನಲ್ಲ. ಕೋಟಿ ಕೋಟಿ ರೂಪಾಯಿ ಪಕ್ಷಗಳ ಖಾತೆಯಲ್ಲಿ ಜಮಾವಣೆ ಮಾಡಿ ಚುನಾವಣೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಿಕೊಳ್ಳುತ್ತದೆ. ಇದೀಗ ರಾಷ್ಟ್ರೀಯ ಪಕ್ಷಗಳು ಅಪರಿಚಿತ ಮೂಲದಿಂದ ಬರೋಬ್ಬರಿ 15,077 ಕೋಟಿ ರೂಪಾಯಿ ಸಂಗ್ರಹಿಸಿರುವುದು ಬಹಿರಂಗವಾಗಿದೆ. 

ರಾಷ್ಟ್ರೀಯ ಪಕ್ಷಗಳು ಬಲ್ಲ ಮೂಲಗಳಿಂದ ನಿಧಿ ಸಂಗ್ರಹ ಮಾಡುತ್ತದೆ. ಆದರೆ ಇದೀಗ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ರಾಷ್ಟ್ರೀಯ ಪಕ್ಷಗಳು ಅಪರಿಚಿತ ಮೂಲಗಳಿಂದಲೂ ನಿಧಿ ಸಂಗ್ರಹ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2004-05 ಹಾಗೂ 2020-21ರಲ್ಲಿ ರಾಷ್ಟ್ರೀಯ ಪಕ್ಷಗಳು ಬರೋಬ್ಬರಿ 15,077 ಕೋಟಿ ರೂಪಾಯಿಯನ್ನು ಅಪರಿಚಿತ ಮೂಲಗಳಿಂದ ಸಂಗ್ರಹಿಸಿದೆ. ಈ ಕುರಿತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮಾಹಿತಿಯನ್ನು ಬಹಿರಂಗಪಡಿಸಿದೆ. ಇಷ್ಟೇ ಅಲ್ಲ ಈ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಆದಾಯ 690.67 ಕೋಟಿ ರೂಪಾಯಿ.  ತೆರಿಗೆ ಇಲಾಖೆಗೆ ರಾಜಕೀಯ ಪಕ್ಷಗಳು ನೀಡಿದ ಮಾಹಿತಿಯನ್ನು ಆಧರಿಸಿ ADR ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಧ್ಯಯನ ಮಾಡಿದೆ. ಬಳಿಕ ಈ ವರದಿ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಪಕ್ಷಗಳಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(INC), ಭಾರತೀಯ ಜನತಾ ಪಾರ್ಟಿ(BJP), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್(AITC), ಕಮ್ಯನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕಿಸ್ಟ್) (CPM), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(CPI) ನ್ಯಾಷನಲ್ ಪೀಪಲ್ಸ್ ಪಾರ್ಟಿ(NPEP)ಮಾಹಿತಿಯನ್ನು  ADR ಕಲೆ ಹಾಕಿ ಈ ವರದಿ ಬಿಡುಗಡೆ ಮಾಡಿದೆ. ಇನ್ನು ಪ್ರಾದೇಶಿಕ ಪಕ್ಷಗಳಾದ ಆಪ್, AIADMK, ಜೆಡಿಎಸ್, ಜೆಡಿಯು, AIMIM ಬಿಜೆಪಿ, ಸಮಾಜವಾದಿ ಪಾರ್ಟಿ, ಶಿವಸೇನಾ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ ನೀಡಿರುವ ಮಾಹಿತಿಯನ್ನು ಹೆಕ್ಕಿ ತೆಗೆಯಲಾಗಿದೆ. 

ಆರ್ಥಿಕ ವರ್ಷ 2020-21ರ ಸಾಲಿನಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಅಪರಿಚಿತ ಮೂಲಗಳಿಂದ 426.74 ಕೋಟಿ ರೂಪಾಯಿ ಆದಾಯ ಪಡೆದಿದೆ. ಇನ್ನು ಪ್ರಾದೇಶಿಕ ಪಕ್ಷಗಳು 263.928 ಆದಾಯ ಪಡೆದಿದೆ.  2020-21ರ ಅವಧಿಯಲ್ಲಿ ಕಾಂಗ್ರೆಸ್ 178.78 ಕೋಟಿ ರೂಪಾಯಿ ಆದಾಯವನ್ನು ಅಪರಿಚಿತ ಮೂಲಗಳಿಂದ ಪಡೆದುಕೊಂಡಿದೆ ಎಂದು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ದಾಖಲೆಯಲ್ಲಿ ಹೇಳಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಒಟ್ಟು ಆದಾಯ 426.74 ಕೋಟಿ ರೂಪಾಯಿ. ಇದಲ್ಲಿ ಶೇಕಡಾ 41.89 ರಷ್ಟು ಆದಾಯ ಅಪರಿಚಿತ ಮೂಲಗಳಿಂದ ಹರಿದುಬಂದಿದೆ.

2020-21ರ ಸಾಲಿನಲ್ಲಿ ಬಿಜೆಪಿ 100.50 ಕೋಟಿ ರೂಪಾಯಿ ಆದಾಯವನ್ನು ಅಪರಿಚಿತ ಮೂಲಗಳಿಂದ ಪಡೆದುಕೊಂಡಿದೆ. ಪಾರ್ಟಿ ಆದಾಯದ ಶೇಕಡಾ 23.55 ರಷ್ಟು ಆದಾಯನ್ನು ಬಿಜೆಪಿ ಅಪರಿಚಿತ ಮೂಲದಿಂದ ಪಡೆದುಕೊಂಡಿದೆ.   ಅಪರಿಚಿತ ಮೂಲದಿಂದ ಪ್ರಾದೇಶಿಕ ಪಕ್ಷಗಳು ಆದಾಯ ಪಡೆದುಕೊಂಡಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ 96.25 ಕೋಟಿ ರೂಪಾಯಿ, ಡಿಎಂಕೆ 80.02 ಕೋಟಿ ರೂಪಾಯಿ, ಬಿಜೆಡಿ 67 ಕೋಟಿ ರೂಪಾಯಿ, ಎಂಎನ್‌ಎಸ್ 5.7 ಕೋಟಿ ರೂಪಾಯಿ, ಆಪ್ 5.4 ಕೋಟಿ ರೂಪಾಯಿ ಅಪರಿಚಿತ ಮೂಲದಿಂದ ಪಡೆದುಕೊಂಡಿದೆ.

© Association for Democratic Reforms
Privacy And Terms Of Use
Donation Payment Method