Source: 
Kannada Prabha
https://www.kannadaprabha.com/politics/2023/may/29/out-of-1001-karnataka-candidates-345-from-different-parties-faced-criminal-cases-adr-report-494893.html
Author: 
IANS
Date: 
29.05.2023
City: 
New Delhi

ಇತ್ತೀಚಿಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 1,001 ಅಭ್ಯರ್ಥಿಗಳ ಪೈಕಿ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಜೆಡಿಎಸ್ ಸೇರಿದಂತೆ ಎಂಟು ಪಕ್ಷಗಳಿಗೆ ಸೇರಿದ 345(ಶೇ.34) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿವೆ...

ಇತ್ತೀಚಿಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 1,001 ಅಭ್ಯರ್ಥಿಗಳ ಪೈಕಿ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಜೆಡಿಎಸ್ ಸೇರಿದಂತೆ ಎಂಟು ಪಕ್ಷಗಳಿಗೆ ಸೇರಿದ 345(ಶೇ.34) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ.

ಎಂಟು ರಾಜಕೀಯ ಪಕ್ಷಗಳಿಗೆ ಸೇರಿದ 1,001 ಅಭ್ಯರ್ಥಿಗಳಲ್ಲಿ 220(ಶೇ.22) ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

"ಕ್ರಿಮಿನಲ್ ಪ್ರಕರಣಗಳಿರುವ 345 ಅಭ್ಯರ್ಥಿಗಳಲ್ಲಿ 287(ಶೇ.83) ಅಭ್ಯರ್ಥಿಗಳಿಗೆ ಕಾರಣಗಳನ್ನು ನೀಡಿದ್ದಾರೆ. ಗಂಭೀರ ಅಪರಾಧ ಪ್ರಕರಣಗಳಿರುವ 220 ಅಭ್ಯರ್ಥಿಗಳ ಪೈಕಿ 191 ಅಭ್ಯರ್ಥಿಗಳು ಕಾರಣಗಳನ್ನು ನೀಡಿದ್ದರೆ 58 ಅಭ್ಯರ್ಥಿಗಳು ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ವರದಿ ಹೇಳಿದೆ.

ವರದಿ ಪ್ರಕಾರ, ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಥೋಡ್ ವಿರುದ್ಧ 45 ಪ್ರಕರಣಗಳು ದಾಖಲಾಗಿದ್ದು, 15 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ.

ಹಾಲಿ ಸಚಿವ ಹಾಗೂ ಬಳ್ಳಾರಿಯಿಂದ ಮೂರು ಬಾರಿ ಶಾಸಕರಾಗಿರುವ ಬಿ.ನಾಗೇಂದ್ರ ಅವರ ವಿರುದ್ಧ 42 ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

ಕ್ರಿಮಿನಲ್ ಹಿನ್ನೆಲೆಯುಳ್ಳ 123 ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯಿಂದ 96, ಜನತಾದಳ-ಸೆಕ್ಯುಲರ್‌ನಿಂದ 71, ಆಮ್ ಆದ್ಮಿ ಪಕ್ಷದ 48, ಬಿಎಸ್‌ಪಿ, ಎಐಎಂಐಎಂ ಮತ್ತು ಸಿಪಿಐನಿಂದ ತಲಾ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ವರದಿ ತಿಳಿಸಿದೆ.

© Association for Democratic Reforms
Privacy And Terms Of Use
Donation Payment Method