Source
Prajavani
https://www.prajavani.net/india-news/10-regional-parties-received-rs-852-crore-through-electoral-bonds-in-2021-22-adr-report-1030055.html
Date
City
New Delhi
‘ದೇಶದ 10 ಪ್ರಾದೇಶಿಕ ಪಕ್ಷಗಳು 2021-22ರಲ್ಲಿ ಚುನಾವಣಾ ಬಾಂಡ್ಗಳ ಮೂಲಕ ₹ 852.88 ಕೋಟಿ ದೇಣಿಗೆಯನ್ನು ಸ್ವೀಕರಿಸುವುದಾಗಿ ಘೋಷಿಸಿವೆ ಎಂದು ಚುನಾವಣಾ ಸುಧಾರಣೆಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
₹ 852.88 ಕೋಟಿ ದೇಣಿಗೆ ಸಂಗ್ರಹಿಸಿರುವ ಪ್ರಾದೇಶಿಕ ಪಕ್ಷಗಳೆಂದರೆ, ಡಿಎಂಕೆ, ಬಿಜೆಡಿ, ವೈಎಸ್ಆರ್ ಕಾಂಗ್ರೆಸ್, ಜೆಡಿಯು, ಎಸ್ಪಿ, ಎಎಪಿ, ಎಸ್ಎಡಿ, ಎಂಜಿಪಿ ಹಾಗೂ ಟಿಡಿಪಿ.
ಇದೇ ಅವಧಿಯಲ್ಲಿ 36 ರಾಜಕೀಯ ಪಕ್ಷಗಳ ಆದಾಯವು ₹ 1,213 ಕೋಟಿ ಎಂದೂ ವರದಿ ಹೇಳಿದೆ.
2021–22ರ ಅವಧಿಯಲ್ಲಿ ದೇಣಿಗೆ ಸಂಗ್ರಹಿಸಿದ ಪ್ರಾದೇಶಿಕ ಪಕ್ಷಗಳ ಪೈಕಿ 21 ಪಕ್ಷಗಳು ತಮಗೆ ಸಿಕ್ಕ ದೇಣಿಗೆಯನ್ನು ಯಾವುದೇ ಕಾರ್ಯಗಳಿಗೆ ಖರ್ಚು ಮಾಡಿಲ್ಲ. ಆದರೆ, 15 ಪಕ್ಷಗಳು ತಮಗೆ ದೊರೆತ ದೇಣಿಗೆಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿವೆ ಎಂದು ವರದಿ ವಿವರಿಸಿದೆ.