ಇದು ಪ್ರಜಾಸತ್ತಾತ್ಮಕ ಸುಧಾರಣಾ ಸಂಘಟನೆ(ಎಡಿಆರ್) ಮತ್ತು ಎಲೆಕ್ಷನ್ ವಾಚ್ ನಡೆಸಿರುವ ಮಾಹಿತಿ ವಿಶ್ಲೇಷಣೆಯ ಸಾರ.
ಆರನೇ ಹಂತದ ಮತದಾನದ ಅಭ್ಯರ್ಥಿಗಳು ಸರಾಸರಿ ಸಂಪತ್ತು 3.41 ಕೋಟಿ ರೂಪಾಯಿ. ಪಶ್ಚಿಮ ಬಂಗಾಳದ ಪುರುಲಿಯಾ ಕ್ಷೇತ್ರದ ಶಿವಸೇಸೆ ಅಭ್ಯರ್ಥಿ ರಾಜೀವ್ ಮೊಹಾತೋ ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಶೈಕ್ಷಣಿಕ ಅರ್ಹತೆ: 395 ಅಭ್ಯರ್ಥಿಗಳ ವಿದ್ಯಾರ್ಹತೆ 5ನೇ ತರಗತಿಯಿಂದ 12ರ ನಡುವೆ ಇದ್ದರೆ, 509 ಮಂದಿ ತಾವು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ. 35 ಮಂದಿ ಅಕ್ಷರಸ್ಥರು ಎಂದಷ್ಟೇ ನಮೂದಿಸಿದ್ದರೆ, 10 ಮಂದಿ ಅನಕ್ಷರಸ್ಥರು. 979 ಅಭ್ಯರ್ಥಿಗಳಲ್ಲಿ 83 ಮಂದಿ ಮಾತ್ರ ಮಹಿಳೆಯರು.
ಅತಿ ಶ್ರೀಮಂತರು
1. ಮಧ್ಯಪ್ರದೇಶದ ಗುನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ- 374 ಕೋಟಿ ರೂ.
2. ದಿಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 147 ಕೋಟಿ ರೂ.
ಕೋಟ್ಯಾಧೀಶರು
ಬಿಜೆಪಿ 46(54)
ಕಾಂಗ್ರೆಸ್ 37(46)
ಬಿಎಸ್‌ಪಿ 31(49)
ಆಮ್ ಆದ್ಮಿ 06(12)
ಪಕ್ಷೇತರರು 71(307)