ಬೆಂಗಳೂರು, ಮೇ 07 : ಕರ್ನಾಟಕ ಚುನಾವಣಾ ಕಣದಲ್ಲಿ ಸರಿ ಸುಮಾರು 883 ಕೋಟ್ಯಧಿಪತಿಗಳಿದ್ದಾರೆ. ಜತೆಗೆ 391 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಪ್ರಕಟಿಸಿದೆ. ಕರ್ನಾಟಕ ವಿಧಾನಸಭೆ ಕದನದಲ್ಲಿರುವ ಸುಮಾರು 2,560 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಈ ಮಾಹಿತಿಯನ್ನು ಎಡಿಆರ್ ಸಂಸ್ಥೆ ನೀಡಿದೆ.
ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1
ಇಷ್ಟೇ ಅಲ್ಲದೆ 883 ಕೋಟ್ಯಧಿಪತಿಗಳ ಜತೆಗೆ ಸುಮಾರು 17 ಮಂದಿ ಅಭ್ಯರ್ಥಿಗಳು ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಕೆ.ಆರ್ ಕ್ಷೇತ್ರದ ಬಿಜೆಪಿಯ ರಾಮದಾಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ. ವಿ ಮಲ್ಲೇಶ್ ಅವರು ಅತ್ಯಂತ ಕಡಿಮೆ ಆಸ್ತಿ ಘೋಷಿಸಿರುವ ಅಭ್ಯರ್ಥಿಗಳ ಪೈಕಿ ಕಾಣಿಸಿಕೊಂಡರೆ, ಕಾಂಗ್ರೆಸ್ಸಿನ ಪ್ರಿಯಾಕೃಷ್ಣ ಹಾಗೂ ಎಂಟಿಬಿ ನಾಗರಾಜು ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಗಳಾಗಿದ್ದಾರೆ.
* 254 (10%) ಅಭ್ಯರ್ಥಿಗಳ ವಿರುದ್ಧ ಗುರುತರ ಕ್ರಿಮಿನಲ್ ಪ್ರಕರಣಗಳಿವೆ.
* 4 ಅಭ್ಯರ್ಥಿಗಳ ವಿರುದ್ಧ ಐಪಿಸಿ 302(ಕೊಲೆ) ಪ್ರಕರಣಗಳಿವೆ.
* 25 ಅಭ್ಯರ್ಥಿಗಳ ವಿರುದ್ಧ ಕೊಲೆ ಸಂಚು(ಐಪಿಸಿ ಸೆಕ್ಷನ್ 307) ಆರೋಪಗಳಿವೆ.
* 23 ಅಭ್ಯರ್ಥಿಗಳ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಗಳಿವೆ. ಐಪಿಸಿ ಸೆಕ್ಷನ್ 354, 509, 493, 498ಎ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.
ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಅಭ್ಯರ್ಥಿಗಳು
ಪಕ್ಷಗಳ ಪೈಕಿ ಬಿಜೆಪಿಯ 224 ಅಭ್ಯರ್ಥಿಗಳ ಪೈಕಿ 83(37%) ಮಂದಿ, ಕಾಂಗ್ರೆಸ್ಸಿನ 220 ಅಭ್ಯರ್ಥಿಗಳ ಪೈಕಿ 59 (27%) ಹಾಗೂ ಜೆಡಿಎಸ್ ನ 199 ಅಭ್ಯರ್ಥಿಗಳ ಪೈಕಿ 41(21%), ಜೆಡಿಯುನ 25 ಅಭ್ಯರ್ಥಿಗಳ ಪೈಕಿ 5(20%), ಎಎಪಿಯ 27 ಅಭ್ಯರ್ಥಿಗಳ ಪೈಕಿ 5(19%), 1090 ಪಕ್ಷೇತರ ಅಭ್ಯರ್ಥಿಗಳ ಪೈಕಿ 108 (10%) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಸ್ಥಿತಿವಂತ ಅಭ್ಯರ್ಥಿಗಳು
* 2560ಅಭ್ಯರ್ಥಿಗಳ ಪೈಕಿ 883 (35%) ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.
* ಪಕ್ಷಗಳ ಪೈಕಿ ಬಿಜೆಪಿಯಲ್ಲಿ 208(93%), ಕಾಂಗ್ರೆಸ್ 207(94%), ಜೆಡಿಎಸ್ 154(17%), ಜೆಡಿಯು 13(52%), ಎಎಪಿ 9(33%), ಪಕ್ಷೇತರರು 199 (18%) ಮಂದಿ ಕನಿಷ್ಟ 1 ಕೋಟಿ ರುಗಳಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ. 2018ರ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಆಸ್ತಿ ಮೌಲ್ಯ ಸರಾಸರಿ 7.54 ಕೋಟಿ ರು ಆಗಲಿದೆ.
* ಪ್ರಿಯಾಕೃಷ್ಣ 1020 ಕೋತಿ, ಎನ್ ನಾಗರಾಜು 1015 ಕೋಟಿ ರು, ಡಿಕೆ ಶಿವಕುಮಾರ್ 840 ಕೋಟಿ ರು ಟಾಪ್ ಮೂರು ಕೋಟ್ಯಧಿಪತಿಗಳು
* 17 ಮಂದಿ ಶೂನ್ಯ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ.