Skip to main content
Source
TV9 Kannada
https://tv9kannada.com/karnataka/which-state-mlas-have-highest-assets-in-india-adr-report-vkb-635750.html
Author
ವಿವೇಕ ಬಿರಾದಾರ
Date
City
Banglore

ನಮ್ಮ ದೇಶದಲ್ಲಿ ಶ್ರೀಮಂತರು ಯಾರು ಎಂಬ ಪ್ರಶ್ನೆಗೆ ಬಹುತೇಕ ಜನರು ರಾಜಕಾರಣಿಗಳು ಎಂದು ಉತ್ತರ ನೀಡುತ್ತಾರೆ. ಕೆಲವೊಂದು ಸಾರಿ ಇದು ಸತ್ಯ ಅನಿಸುವುದು ಉಂಟು. ಇದೀಗ ದೇಶದ ಯಾವ ರಾಜ್ಯದ ರಾಜಕಾರಣಿಗಳು ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ಉತ್ತರ.

ನಮ್ಮ ದೇಶದಲ್ಲಿ ಶ್ರೀಮಂತರು ಯಾರು ಎಂಬ ಪ್ರಶ್ನೆಗೆ ಬಹುತೇಕ ಜನರು ರಾಜಕಾರಣಿಗಳು (Politicians) ಎಂದು ಉತ್ತರ ನೀಡುತ್ತಾರೆ. ಕೆಲವೊಂದು ಸಾರಿ ಇದು ಸತ್ಯ ಅನಿಸುವುದು ಉಂಟು. ಇದೀಗ ದೇಶದ ಯಾವ ರಾಜ್ಯದ ರಾಜಕಾರಣಿಗಳು ಎಷ್ಟು ಆಸ್ತಿ (Property) ಹೊಂದಿದ್ದಾರೆ? ಇಲ್ಲಿದೆ ಉತ್ತರ. ದೇಶದಲ್ಲೇ ಕರ್ನಾಟಕದ (Karnataka) ರಾಜಕಾರಣಿಗಳು ಹೆಚ್ಚು ಆಸ್ತಿ ಹೊಂದಿದ್ದಾರೆ. ಹೌದು ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರೂಪಾಯಿಗಳಷ್ಟಿದೆ. ಆಶ್ಚರ್ಯವೆನಿಸಿದರು ಸತ್ಯ. ಭಾರತದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜಕೀಯ ವ್ಯಕ್ತಿಗಳಿಗಿಂತ ರಾಜ್ಯ ರಾಜಕಾರಣಿಗಳ ಆಸ್ತಿ ಅಧಿಕವಾಗಿದೆ.

ಇತ್ತೀಚಿಗೆ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​​​ (ADR) ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ (NEW) ದೇಶದ ರಾಜ್ಯ ವಿಧಾನಸಭೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಹಾಲಿ ಶಾಸಕರ ಸ್ವಯಂ ಘೋಷಿತ ದಾಖಲೆಗಳನ್ನು (ಅಫಿಡವಿಟ್​) ಆಧಾರಿಸಿ ಈ ಮಾಹಿತಿ ಬಹಿರಂಗಪಡಿಸಿದೆ.

ಶಾಸಕರು ಚುನಾವಣೆ ಸಂದರ್ಭದಲ್ಲಿ ಸ್ವಯಂ ಘೋಷಿತ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ದಾಖಲಿಸಿರುತ್ತಾರೆ. ದೇಶದ 28 ವಿಧಾನಸಭೆ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ 4001 ಶಾಸಕರ ಆಸ್ತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ 4001 ಹಾಲಿ ಶಾಸಕರು 84 ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದಾರೆ.

ಹೆಚ್ಚು ಆಸ್ತಿ ಹೊಂದಿದ ಶಾಸಕರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಇನ್ನು ಕರ್ನಾಟಕದ 223 ಶಾಸಕರ ಒಟ್ಟು ಆಸ್ತಿ ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳ ವಾರ್ಷಿಕ ಬಜೆಟ್​​ಗಿಂತ ಹೆಚ್ಚಾಗಿದೆ. ದೇಶದ 4001 ಶಾಸಕರ ಆಸ್ತಿ 54,545 ಕೋಟಿ ರೂಪಾಯಿ.

ರಾಜಸ್ಥಾನ, ಪಂಜಾಬ್, ಅರುಣಾಚಲ ಪ್ರದೇಶ, ಬಿಹಾರ, ದೆಹಲಿ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಹಾಲಿ ಶಾಸಕರ ಒಟ್ಟು ಆಸ್ತಿಗಿಂತ ಹೆಚ್ಚು. ಪಶ್ಚಿಮ ಬಂಗಾಳ, ಗೋವಾ, ಮೇಘಾಲಯ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಉತ್ತರಾಖಂಡ, ಕೇರಳ, ಪುದುಚೇರಿ, ಜಾರ್ಖಂಡ್, ಸಿಕ್ಕಿಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಈ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಾಲಿ ಶಾಸಕರ ಒಟ್ಟು ಆಸ್ತಿ 13,976 ಕೋಟಿ ರೂ. ಆಗಿದೆ.

ಕಡಿಮೆ ಆಸ್ತಿ ಹೊಂದಿರುವ ರಾಜ್ಯ ತ್ರಿಪುರಾ ಆಗಿದ್ದು, ಅಲ್ಲಿ ಎಲ್ಲಾ 59 ಶಾಸಕರ ಒಟ್ಟು ಆಸ್ತಿ 90 ಕೋಟಿ ರೂ. ಮಿಜೋರಾಂನ 40 ಶಾಸಕರ ಆಸ್ತಿ 160 ಕೋಟಿ ರೂ. ಮತ್ತು ಮಣಿಪುರದಲ್ಲಿ 60 ಶಾಸಕರ ಒಟ್ಟು ಆಸ್ತಿ 225 ಕೋಟಿ ರೂ. ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಶಾಸಕರ ಸರಾಸರಿ ಮೌಲ್ಯ 13.63 ಕೋಟಿ ರೂ. ಆಗಿದೆ.

1,356 ಬಿಜೆಪಿ ಶಾಸಕರಲ್ಲಿ ಪ್ರತಿ ಶಾಸಕರ ಬಳಿ ಸರಾಸರಿ 16,234 ಕೋಟಿ, ಕಾಂಗ್ರೆಸ್​ನ 719 ಶಾಸಕರ ಬಳಿ 21.97 ಕೋಟಿ, 227 ಎಐಟಿಸಿ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) ಶಾಸಕರ ಬಳಿ 3.51 ಕೋಟಿ, 161 ಎಎಪಿ ಶಾಸಕರು 10.20 ಕೋಟಿ, ಮತ್ತು 146 YSRCP ಶಾಸಕರು 23.14 ಕೋಟಿ ರೂ. 131 ಡಿಎಂಕೆ ಶಾಸಕರು 1,663 ಕೋಟಿ ರೂ., ಮತ್ತು 161 ಆಪ್​​ ಶಾಸಕರು 1,642 ಕೋಟಿ ರೂ ಆಸ್ತಿ ಹೊಂದಿದ್ದಾರೆ.

4,001 ಹಾಲಿ ಶಾಸಕರ ಒಟ್ಟು ಆಸ್ತಿಯು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂನ 2023-24 ರ ವಾರ್ಷಿಕ ಬಜೆಟ್‌ಗಿಂತ ಹೆಚ್ಚಾಗಿದೆ. ನಾಗಾಲ್ಯಾಂಡ್‌ನ 2023-24ರ ಬಜೆಟ್ 23,086 ಕೋಟಿ ರೂ. ಮಿಜೋರಾಂನ ಬಜೆಟ್​ 14,210 ಕೋಟಿ ರೂ. ಮತ್ತು ಸಿಕ್ಕಿಂನ ಬಜೆಟ್​ 11,807 ರೂ. ಇದೆ.


abc