ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ ಸಂಸತ್ತಿನ 763 ಸದಸ್ಯರಲ್ಲಿ (MPs), 306 (40%) ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ಸಂಸದರು ತಮ್ಮ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್ಗಳಿಂದ ಡೇಟಾವನ್ನುಮಾಹಿತಿಯನ್ನು ಪಡೆಯಲಾಗಿದೆ. ಸುಮಾರು 194 (25%) ಸಂಸದರು ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ತಮ್ಮ ಸ್ವಯಂ ಪ್ರಮಾಣ ಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ ಸಂಸದರ ಪಟ್ಟಿಯಲ್ಲಿ ಕೇರಳ (73%) ಅಗ್ರಸ್ಥಾನದಲ್ಲಿದೆ, ನಂತರ ಬಿಹಾರ, ಮಹಾರಾಷ್ಟ್ರ (57%) ಮತ್ತು ತೆಲಂಗಾಣ (50%) ರಾಜ್ಯಗಳಿವೆ.
ಬಿಹಾರ (50%) ಸಂಸದರ ಅತಿ ಹೆಚ್ಚು ಶೇಕಡಾವಾರು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದೆ ನಂತರ ತೆಲಂಗಾಣ (9%), ಕೇರಳ (10%), ಮಹಾರಾಷ್ಟ್ರ (34%) ಮತ್ತು ಉತ್ತರ ಪ್ರದೇಶ (37%) ರಾಜ್ಯಗಳು ಹೊಂದಿವೆ.
ಬಿಜೆಪಿಯ 139 ಸಂಸದರ ಮೇಲೆ ಹೆಚ್ಚು ಪ್ರಕರಣ
ಪಕ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) 385 ಸಂಸದರಲ್ಲಿ 139 (36%), ಕಾಂಗ್ರೆಸ್ನ 81 ಸಂಸದರಲ್ಲಿ 43 (53%), ತೃಣಮೂಲದ 36 ಸಂಸದರಲ್ಲಿ 14 (39%) ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಯಿಂದ 6 ಸಂಸದರಲ್ಲಿ 5 (83%), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಅಥವಾ ಸಿಪಿಐ(ಎಂ), 3 (27) 8 ಸಂಸದರಲ್ಲಿ 6 (75%) ಆಮ್ ಆದ್ಮಿ ಪಕ್ಷದ (ಎಎಪಿ) 11 ಸಂಸದರಲ್ಲಿ, YSRCP ಯ 31 ಸಂಸದರಲ್ಲಿ 13 (42%) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) 8 ಸಂಸದರಲ್ಲಿ 3 (38%) ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎನ್ನುವುದು ತಿಳಿದುಬಂದಿದೆ.
ಸಲ್ಲಿಸಿದ ಅಫಿಡವಿಟ್ಗಳ ಪ್ರಕಾರ, 32 ಸಂಸದರು 'ಕೊಲೆ ಯತ್ನ' (ಐಪಿಸಿ ಸೆಕ್ಷನ್ 307) ಪ್ರಕರಣಗಳನ್ನು ಘೋಷಿಸಿದ್ದಾರೆ. ಇಪ್ಪತ್ತೊಂದು ಸಂಸದರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಅವರಲ್ಲಿ 4 ಸಂಸದರ ಮೇಲೆ ಅತ್ಯಾಚಾರ ಪ್ರಕರಣಗಳು (ಐಪಿಸಿ ಸೆಕ್ಷನ್ 376) ದಾಖಲಾಗಿವೆ.
ಸಂಸದರ ಸರಾಸರಿ ಆಸ್ತಿ
ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿ ಸಂಸದರ ಸರಾಸರಿ ಆಸ್ತಿ ₹38.33 ಕೋಟಿಯಾಗಿದೆ. ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸರಾಸರಿ ಆಸ್ತಿ ₹ 50.03 ಕೋಟಿಯಾಗಿದ್ದರೆ, ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಸಂಸದರ ಆಸ್ತಿ ₹ 30.50 ಕೋಟಿ ಎಂದು ಅಂಕಿ ಅಂಶಗಳು ತಿಳಿಸಿವೆ.
ತೆಲಂಗಾಣ (24 ಸಂಸದರು) ₹262.26 ಕೋಟಿ ಮೌಲ್ಯದ ಸರಾಸರಿ ಆಸ್ತಿಯೊಂದಿಗೆ ಸಂಸದರ ಅತ್ಯಧಿಕ ಸರಾಸರಿ ಆಸ್ತಿಯನ್ನು ಹೊಂದಿದೆ, ಆಂಧ್ರಪ್ರದೇಶ (36 ಸಂಸದರು) ₹150.76 ಕೋಟಿ ಮೌಲ್ಯದ ಸರಾಸರಿ ಆಸ್ತಿ ಮತ್ತು ಪಂಜಾಬ್ (20 ಸಂಸದರು) ಸರಾಸರಿ ಆಸ್ತಿ ₹88.94 ಕೋಟಿ ಮೌಲ್ಯದ್ದಾಗಿದೆ.
ಲೋಕಸಭೆಯ ನಾಲ್ಕು ಸ್ಥಾನಗಳು ಮತ್ತು ರಾಜ್ಯಸಭೆಯ ಒಂದು ಸ್ಥಾನವು ಖಾಲಿಯಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ಒಬ್ಬ ಲೋಕಸಭಾ ಸಂಸದ ಮತ್ತು 3 ರಾಜ್ಯಸಭಾ ಸಂಸದರ ಅಫಿಡವಿಟ್ಗಳು ಲಭ್ಯವಿಲ್ಲದ ಕಾರಣ ಅವರ ಅಫಿಡವಿಟ್ ಅನ್ನು ವಿಶ್ಲೇಷಿಸಲಾಗಿಲ್ಲ.