Skip to main content
Source
TV9 Kannada
https://tv9kannada.com/national/adr-report-shows-40-percent-mps-have-criminal-cases-against-them-kerala-tops-the-list-see-details-here-in-kannada-gsp-668657.html
Date
City
New Delhi

ADR report; ವರದಿಯ ಪ್ರಕಾರ, 763 ಸಂಸತ್ ಸದಸ್ಯರ (ಲೋಕಸಭೆ, ರಾಜ್ಯಸಭೆ ಸೇರಿ) ಹಿನ್ನೆಲೆ ಪರೀಕ್ಷಿಸಲಾಗಿದ್ದು, ಅವರಲ್ಲಿ ಕನಿಷ್ಠ 306 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 194 ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ.

ದೇಶದ ಒಟ್ಟು ಸಂಸತ್ ಸದಸ್ಯರ ಪೈಕಿ ಶೇ 40ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆ (Criminal Cases) ಎದುರಿಸುತ್ತಿದ್ದು, ಈ ಪೈಕಿ ಶೇ 25ರಷ್ಟು ಗಂಭೀರ ಸ್ವರೂಪದ ಅಪರಾಧಗಳಾಗಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR report) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ವರದಿಯ ಪ್ರಕಾರ, 763 ಸಂಸತ್ ಸದಸ್ಯರ (ಲೋಕಸಭೆ, ರಾಜ್ಯಸಭೆ ಸೇರಿ) ಹಿನ್ನೆಲೆ ಪರೀಕ್ಷಿಸಲಾಗಿದ್ದು, ಅವರಲ್ಲಿ ಕನಿಷ್ಠ 306 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 194 ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ. ಸಂಸದರು ಈ ಹಿಂದಿನ ಚುನಾವಣೆಗಳಲ್ಲಿ ಮತ್ತು ನಂತರದ ಉಪಚುನಾವಣೆಗಳ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ಅಧ್ಯಯನ ಮಾಡುವ ಮೂಲಕ ಎಡಿಆರ್ ಈ ವಿಶ್ಲೇಷಣೆಯನ್ನು ನಡೆಸಿದೆ.

ಲಕ್ಷದ್ವೀಪದ ಎಲ್ಲಾ ಸಂಸದರು (ಶೇ 100) ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೇರಳದ 29 ಸಂಸದರ ಪೈಕಿ 23 ಮಂದಿ (ಶೇ 79) ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದು, ರಾಜ್ಯವು ಮುಂಚೂಣಿಯಲ್ಲಿದೆ. ಬಿಹಾರದಲ್ಲಿ 56 ಸಂಸದರಲ್ಲಿ 41 (ಶೇ 73) ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಮಹಾರಾಷ್ಟ್ರದ 65 ಸಂಸದರಲ್ಲಿ 37 (ಶೇ 57), ತೆಲಂಗಾಣದಲ್ಲಿ 24 ಸಂಸದರಲ್ಲಿ 13 (ಶೇ 54), ಮತ್ತು ದೆಹಲಿಯಲ್ಲಿ 10 ಸಂಸದರಲ್ಲಿ 5 (ಶೇ 50) ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದು ಅವರ ಅಫಿಡವಿಟ್‌ಗಳಿಂದ ಬಹಿರಂಗವಾಗಿವೆ.

ಬಿಜೆಪಿಯಲ್ಲೇ ಅತಿಹೆಚ್ಚು

ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಅತಿ ಹೆಚ್ಚು ಸಂಸದರನ್ನು ಬಿಜೆಪಿ ಹೊಂದಿದೆ ಎಂದು ವರದಿ ತಿಳಿಸಿದೆ. ಬಿಜೆಪಿಯ 385 ಸಂಸದರಲ್ಲಿ 98 ಮಂದಿ (ಅವರ ಶೇಕಡಾ 25 ರಷ್ಟು ಸಂಸದರು) ತಮ್ಮ ಅಫಿಡವಿಟ್‌ಗಳಲ್ಲಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ 81 ಸಂಸದರಲ್ಲಿ 26 (ಶೇ 32) ಇದೇ ರೀತಿಯ ಘೋಷಣೆಗಳನ್ನು ಮಾಡಿದ್ದಾರೆ. ಎಐಟಿಸಿಯ 36 ಸಂಸದರಲ್ಲಿ 7 (ಶೇ 19) ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರೆ, ಆರ್‌ಜೆಡಿಯ 6 ಸಂಸದರಲ್ಲಿ 3 (ಶೇ 50) ಹೊಂದಿತ್ತು. ಸಿಪಿಐ(ಎಂ) ಸಂಸದರಲ್ಲಿ, 8 ರಲ್ಲಿ 2 (ಶೇ 25) ಅಂತಹ ಘೋಷಣೆಗಳನ್ನು ಮಾಡಿದ್ದರು ಮತ್ತು ಎಎಪಿಯ 11 ಸಂಸದರಲ್ಲಿ 1 (ಶೇ 9) ಮಾಡಿದ್ದರು. ವೈಎಸ್​ಆರ್​ಪಿ 31 ಸಂಸದರಲ್ಲಿ 11 (35 ಪ್ರತಿಶತ) ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರೆ ಎನ್​ಸಿಪಿಯ 8 ಸಂಸದರಲ್ಲಿ 2 (ಶೇ 25) ತಮ್ಮ ಅಫಿಡವಿಟ್‌ಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪೋಸ್ಟ್

ಯಾವ ಪಕ್ಷದ ಸಂಸದರ ಬಳಿ ಹೆಚ್ಚು ಸಂಪತ್ತು?

ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿ ಸಂಸದರ ಸರಾಸರಿ ಆಸ್ತಿ 38.33 ಕೋಟಿ ರೂ. ಆಗಿದ್ದು, 385 ಬಿಜೆಪಿ ಸಂಸದರ ಒಟ್ಟು ಆಸ್ತಿ 7,051 ಕೋಟಿ ರೂ. ಆಗಿದೆ. 763 ಹಾಲಿ ಸಂಸದರ ಒಟ್ಟು ಆಸ್ತಿ 29,251 ಕೋಟಿ ರೂ. ಆಗಿದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

ಬಿಜೆಪಿಯ 385 ಸಂಸದರ ಒಟ್ಟು ಆಸ್ತಿ 7,051 ಕೋಟಿ ರೂ., 16 ಟಿಆರ್‌ಎಸ್ ಸಂಸದರ ಒಟ್ಟು ಆಸ್ತಿ 6,136 ಕೋಟಿ ರೂ., ವೈಎಸ್‌ಆರ್‌ಸಿಪಿಯ 31 ಸಂಸದರಿಗೆ 4,766 ಕೋಟಿ ರೂ., 81 ಕಾಂಗ್ರೆಸ್ ಸಂಸದರ ವಿಶ್ಲೇಷಣೆ 3,169 ಕೋಟಿ ಮತ್ತು 11 ಎಎಪಿ ಸಂಸದರ ಆಸ್ತಿ 1,318 ಕೋಟಿ ರೂ. ಎಂದು ವರದಿ ತಿಳಿಸಿದೆ.


abc